ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಮಂಗಳವಾರ, ಜುಲೈ 24, 2012

ಭಗವಾನ್ ರಮಣ ಮಹರ್ಷಿಗಳು

ದಿನಾಂಕ 22.07.2012 ರಂದು ಹಾಸನದಲ್ಲಿ ನಡೆದ ಚಿನ್ಮಯ ಸತ್ಸಂಗದಲ್ಲಿ ತಿಪಟೂರು ಚಿನ್ಮಯ ಕೇಂದ್ರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ರಮಣ ಮಹರ್ಶಿಗಳ ಬಗ್ಗೆ ಪ್ರವಚನ ಮಾಡಿದರು. ಪ್ರವಚನದ, ಭಜನೆಯ ಮತ್ತು ಪ್ರವಚನಕ್ಕೆ ಪೂರಕವಾದ ಶ್ರೀ ಶಂಕರಾಚಾರ್ಯ ವಿರಚಿತ ನಿರ್ವಾಣಷಟ್ಕದ ಆಡಿಯೋ ಕ್ಲಿಪ್ ಗಳನ್ನು ಈ ಕೆಳಗೆ ನೀಡಲಾಗಿದೆ.



ಸೋಮವಾರ, ಜುಲೈ 23, 2012

ವಿಶೇಷ ರೀತಿಯ ಹುಟ್ಟುಹಬ್ಬ!

ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದ ಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು   ಹಾಸನದ ವೃದ್ಧಾಶ್ರಮದಲ್ಲಿ  ಆಚರಿಸಿದ್ದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು "ಬಿಂದು" ಅಪ್ಪನಿಗೆ ಹೇಳಿದಳು" ಅಕ್ಷತಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನದ ಹಣ ಕೊಡೋಣ"
ನಾಗರಾಜ್ ಹೇಳಿದರು" ನೋಡಮ್ಮಾ  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!
"ಏನು ಹಾಗಂದ್ರೆ?" ಮಗಳು ಕೇಳಿದಳು.
" ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಬ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ"
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು, ಎಂದರು. ಸರಿ ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ,ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  ಅಕ್ಷತಾ  ನೀನು ನೂರ್ಕಾಲ ಬಾಳಮ್ಮಾ ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ      ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು " ಈ ಆಶ್ರಮದಲ್ಲಿ ಆಚರಿಸಬಹುದೆಂದು" ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ" ಎಂದು ತಿಳಿಸಲು ಸಂತೋಷಿಸುತ್ತೇವೆ.
                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗಧಿ ಪಡಿಸಲಾಗಿದೆ. 


ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ಅಜ್ಜಿ ನೀವು ಬೆಚ್ಚಗಿರಬೇಕು

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್








ಗುರುವಾರ, ಜೂನ್ 28, 2012

ತಿಪಟೂರು ಕೇಂದ್ರಕ್ಕೆ ಭೇಟಿ






ವಿನಯ


ಇತ್ತೀಚಿಗೆ ಹಾಸನದ ಶ್ರೀ ಶಂಕರ ಮಠ ದಲ್ಲಿ ಬೆಂಗಳೂರು ಚಿನ್ಮಯ ಮಿಷನ್ನಿನ ಸ್ವಾಮೀಜಿ ಪೂಜ್ಯ ಕೃತಾತ್ಮಾ ನಂದ ರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಪೂಜ್ಯರು ಮಾನವೀಯ ಮೌಲ್ಯಗಳ ಬಗೆಗೆ ಪ್ರವಚನಗಳನ್ನು ನೀಡಿದರು. ವಿನಯ ಎಂಬ ವಿಷಯದಲ್ಲಿ ಪೂಜ್ಯರು ಮಾಡಿದ ಪ್ರವಚನ ಇಲ್ಲಿದೆ.

ಸಮತ್ವ

ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.





ಪೂಜ್ಯ ಕೃತಾತ್ಮಾ ನಂದರ ಪ್ರವಚನ.


ಹಾಸನದ ಶ್ರೀ ಶಂಕರ ಮಠಕ್ಕೆ  ಪ್ರವಚನಕ್ಕಾಗಿ ಮೊದಲು ಬಂದವರು   ತಿಪಟೂರಿನ  ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು.ಆನಂತರ ಬೆಂಗಳೂರಿನ ಸ್ವಾಮಿ                  ಕೃತಾತ್ಮಾನಂದರು ಬಂದು ಉಪನ್ಯಾಸವನ್ನು ನೀಡಿದರು. ಆ ಸಂದರ್ಭದಲ್ಲಿ ಆಗತಾನೆ ನಿರ್ಮಾಣವಾಗುತ್ತಿದ್ದ ನಮ್ಮ ಮನೆಯಲ್ಲಿ ಸತ್ಸಂಗವನ್ನು  ಸ್ವಾಮೀಜಿಯವರು ನಡೆಸಿಕೊಟ್ಟಿದ್ದರು. ನಂತರದಲ್ಲಿ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಸೀತಾರಾಮಾಂಜ ನೇಯ ದೇವಾಲಯದಲ್ಲಿ  ಶ್ರೀ ರಾಮೋತ್ಸವದ ಸಂದರ್ಭದಲ್ಲಿ ನೀಡಿದ ಶ್ರೀ ರಾಮಾಯಣ ಪ್ರವಚನವು  ಸಾವಿರಾರು ಜನರನ್ನು ಆಕರ್ಶಿಸಿದೆ.  ಹಾಸನದಲ್ಲಿ ಇದೇ ಉತ್ಸಾಹದಲ್ಲಿ  ಚಿನ್ಮಯ  ಮಿಷನ್ನಿನ  ಶಾಖೆಯೊಂದು ಆರಂಭವಾಗಲೆಂಬುದು ಹಲವರ ಆಶಯವಾಗಿದೆ. 
-ಹರಿಹರಪುರ ಶ್ರೀಧರ್


ಜೀವನ ಮೌಲ್ಯ  "ಅಹಿಂಸೆ" ಬಗೆಗೆ ಪೂಜ್ಯ ಕೃತಾತ್ಮಾ ನಂದರ ಪ್ರವಚನ.

ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ.  ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.



ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 



ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?



ಮಂಗಳವಾರ, ಜೂನ್ 19, 2012

ಬಿಕ್ಷುಕ


 ಬಿಕ್ಷುಕನೊಬ್ಬ ರಸ್ತೆಬದಿಯಲ್ಲಿ ಒಂದು ಕಲ್ಲಿನ ಚಪ್ಪಡಿಯಮೇಲೆ ಕುಳಿತು ಬಿಕ್ಷೆ ಬೇಡುತ್ತಿದ್ದಾನೆ. ಅದೇ ದಾರಿಯಲ್ಲಿ ಸನ್ಯಾಸಿಯೊಬ್ಬ ಬರುತ್ತಾನೆ.ಬಿಕ್ಷುಕನನ್ನು ನೋಡಿ -


"ಏನ್ ಮಾಡ್ತಾ ಇದೀಯಾ?" 


-."ಬಿಕ್ಷೆ ಬೇಡ್ತಾ ಇದೀನಿ ಸ್ವಾಮಿ, ಮೂರು ದಿನಗಳಿಂದ ಹೊಟ್ಟೆಗಿಲ್ಲ.


-  ಮೂರು ದಿನಗಳಿಂದ ಇಲ್ಲೇ ಇದ್ದೀಯಾ? "


- ಹೌದು ಸ್ವಾಮಿ ಇಲ್ಲೇ ಪಕ್ಕದಲ್ಲಿ ರಾತ್ರಿಹೊತ್ತು ಮಲಗುವೆ. ಬೆಳಿಗ್ಗೆ ಬಿಕ್ಷೆ ಎತ್ತುವೆ."-


-  ನೀನು ಕುಳಿತಿದ್ದೀಯಲ್ಲಾ ಕಲ್ಲು ಅದನ್ನು ಜರುಗಿಸಿದ್ದೀಯಾ?"


-ಇಲ್ಲಾ ಸ್ವಾಮಿ, ನಾನೇಕೇ ಜರುಗಿಸಲಿ?


-ಇಲ್ಲೆಲ್ಲಾ  ಕಸ ಬಿದ್ದಿದೆಯಲ್ಲಾ, ಅದನ್ನು ಜರುಗಿಸಿ ಕಸ ತೆಗೆಯಬಾರದಿತ್ತಾ?


-ಕಸ ಇರ್ಲೀ ಬಿಡಿ ಸ್ವಾಮಿ, ಅದೇನ್ ಮಾಡೀತು? 


-ಸ್ವಲ್ಪ ಕಲ್ಲು ಜರುಗಿಸುತ್ತೀಯಾ?


-ಯಾಕ್ ಸ್ವಾಮಿ?


-ಕಸ ಇದೆಯಲ್ಲಾ, ಅದೆಲ್ಲಾ ಎತ್ತಿ ಹಾಕೋಕೆ....ಎಂದ ಸನ್ಯಾಸಿ ತಾನೇ ಕಲ್ಲನ್ನು ಜರಗಿಸುತ್ತಾನೆ.  ಬಿಕ್ಷುಕನಿಗೆ ಆಶ್ಚರ್ಯ ಕಾದಿರುತ್ತೆ.  ತಾನು ಕುಳಿತಿದ್ದ ಕಲ್ಲಿನ ಕೆಳಗೆ  ಹಣದ ಪೆಟ್ಟಿಗೆ!!

ಹೌದು, ಆ ಬಿಕ್ಷುಕ ಮಾತ್ರವಲ್ಲಾ, ನಾವೂ ಕೂಡ ನಮ್ಮ  ಒಳಗಿರುವ ಐಶ್ವರ್ಯದ  ಪಟ್ಟಿಗೆಯ ಬಾಗಿಲನ್ನು ತೆರೆದೇ ಇಲ್ಲ.ಪೆಟ್ಟಿಗೆ ಬಾಗಿಲು ತೆರೆಯದೆ ,ತೆರೆಯಲು ಗೊತ್ತಾಗದೆ ಮನುಷ್ಯ ಅದೆಷ್ಟು  ಸಂಕಟ  ಪಡುತ್ತಾನೆ, ತನ್ನೊಳಗೇ ಇರುವ ಆನಂದವನ್ನು ಕಂಡುಕೊಳ್ಳಲಾರ! ಸನಿಹದಲ್ಲಿಯೇ ಇರುವ ಕಾಮ.ಕ್ರೋಧ, ಲೋಭ,ಮೋಹ, ಮದ,ಮತ್ಸರವೆಂಬ ಕಸವನ್ನು ಗುಡಿಸದೆ, ಅದರಲ್ಲಿಯೇ ಹೊರಳಾಡುತ್ತಿದ್ದಾನೆ. ಪೆಟ್ತಿಗೆಯ ಬಾಗಿಲು   ತೆರೆದು ಬಿಟ್ಟರೆ ಮನತಣಿಸುವ  ಆತ್ಮಾನಂದ!!ನಮ್ಮೊಳಗಿರುವ ಆನಂದವನ್ನು  ಕಂಡುಕೊಳ್ಳುವ ದಾರಿ ನಮಗೆ ಗೊತ್ತಿಲ್ಲ. ಅದಕ್ಕಾಗಿ  ಈ ಸನ್ಯಾಸಿಯಂತಹ ಗುರುವಿನ ಅವಶ್ಯಕತೆ ಇದೆ. 

ಸೋಮವಾರ, ಜೂನ್ 18, 2012

ಯಶಸ್ವೀ ಸತ್ಸಂಗ

 ದಿನಾಂಕ 17.6.2012 ಭಾನುವಾರ  ಹಾಸನದಲ್ಲಿ  ಚಿನ್ಮಯ ಸತ್ಸಂಗದ ಶುಭಾರಂಭವಾಯ್ತು.   ಬೆಳಿಗ್ಗೆ 11.00 ಗಂಟೆಗೆ ನಡೆದ ಆಸಕ್ತರ ಸಭೆಯಲ್ಲಿ  ತಿಪಟೂರು ಚಿನ್ಮಯಾ ಸಂಸ್ಥೆಯ  ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು     ಮಾರ್ಗದರ್ಶನ ಮಾಡಿದರು. ಸಂಜೆ 6.00 ಗಂಟೆಗೆ  ನಡೆದ  ಸತ್ಸಂಗದಲ್ಲಿ ಹಾಸನದ ನೂರಾರು ಜನ ಭಕ್ತರು ಪಾಲ್ಗೊಂಡು ಸತ್ಸಂಗದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಲಿತಾರಮೇಶರ ಪ್ರಾರ್ಥನೆಯೊಂದಿಗೆ ಆರಂಭವಾದ ಸತ್ಸಂಗದಲ್ಲಿ ಶ್ರೀಹರಿಹರಪುರ ಶ್ರೀಧರರು ಹಾಸನದಲ್ಲಿ ಚಿನ್ಮಯ ಸಂಸ್ಥೆಯ ನ್ನು  ಆರಂಭಿಸಲು ಎಲ್ಲರ ಸಹಕಾರ ಕೋರಿ ಸಭೆಗೆ ಸ್ವಾಮೀಜಿಯವರನ್ನು ಪರಿಚಯಿಸಿದರು. ಸ್ವಾಮೀಜಿಯವರು ನಡೆಸಿಕೊಟ್ಟ ಭಜನೆ ಮತ್ತು ನಂತರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆಯಿಂದ  ಭಕ್ತರು ಪಾಲ್ಗೊಂಡು  ಕೊನೆಯಲ್ಲಿ ಸ್ವಾಮೀಜಿಯವರಿಂದ ಪ್ರಸಾದವನ್ನು ಪಡೆದರು. 




 ಮುಂದಿನ ಸತ್ಸಂಗವು  ಈಶಾವಾಸ್ಯಮ್  ಸಭಾಂಗಣದಲ್ಲಿಯೇ  ಜುಲೈ 8 ರಂದು ಅಪರಾಹ್ನ 4.00 ಗಂಟೆಗೆ ನಡೆಯಲಿದ್ದು  ತದನಂತರ ಜುಲೈ 22 ರಂದು ಅದೇ ಸ್ಥಳದಲ್ಲಿ  ಅಪರಾಹ್ನ 4.00 ಗಂಟೆಗೆ ನಡೆಯುವ ಸತ್ಸಂಗದಲ್ಲಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಳ್ಳಲಿರುವರು.



















ಶುಕ್ರವಾರ, ಜೂನ್ 15, 2012

ಚಿನ್ಮಯ ಸತ್ಸಂಗ


ಚಿನ್ಮಯ ಸತ್ಸಂಗ
11.06.2012 ಭಾನುವಾರ
ಸ್ಥಳ: ಈಶಾವಾಸ್ಯಮ್,ಶಕ್ತಿಗಣಪತಿದೇವಾಲಯ ರಸ್ತೆ
ಹೊಯ್ಸಳನಗರ,ಹಾಸನ
ಆಸಕ್ತರ ಸಭೆ: ಬೆಳಿಗ್ಗೆ 11.00 ಕ್ಕೆ        ಸತ್ಸಂಗ: ಸಂಜೆ: 6.00 ಕ್ಕೆ
ಮಿತ್ರರೊಡಗೂಡಿ ಬನ್ನಿ,  
ಸಂಪರ್ಕಿಸಲು: 9663572406