ಗುರುವಾರ, ಜೂನ್ 28, 2012
ಪೂಜ್ಯ ಕೃತಾತ್ಮಾ ನಂದರ ಪ್ರವಚನ.
ಹಾಸನದ ಶ್ರೀ ಶಂಕರ ಮಠಕ್ಕೆ ಪ್ರವಚನಕ್ಕಾಗಿ ಮೊದಲು ಬಂದವರು ತಿಪಟೂರಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು.ಆನಂತರ ಬೆಂಗಳೂರಿನ ಸ್ವಾಮಿ ಕೃತಾತ್ಮಾನಂದರು ಬಂದು ಉಪನ್ಯಾಸವನ್ನು ನೀಡಿದರು. ಆ ಸಂದರ್ಭದಲ್ಲಿ ಆಗತಾನೆ ನಿರ್ಮಾಣವಾಗುತ್ತಿದ್ದ ನಮ್ಮ ಮನೆಯಲ್ಲಿ ಸತ್ಸಂಗವನ್ನು ಸ್ವಾಮೀಜಿಯವರು ನಡೆಸಿಕೊಟ್ಟಿದ್ದರು. ನಂತರದಲ್ಲಿ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಸೀತಾರಾಮಾಂಜ ನೇಯ ದೇವಾಲಯದಲ್ಲಿ ಶ್ರೀ ರಾಮೋತ್ಸವದ ಸಂದರ್ಭದಲ್ಲಿ ನೀಡಿದ ಶ್ರೀ ರಾಮಾಯಣ ಪ್ರವಚನವು ಸಾವಿರಾರು ಜನರನ್ನು ಆಕರ್ಶಿಸಿದೆ. ಹಾಸನದಲ್ಲಿ ಇದೇ ಉತ್ಸಾಹದಲ್ಲಿ ಚಿನ್ಮಯ ಮಿಷನ್ನಿನ ಶಾಖೆಯೊಂದು ಆರಂಭವಾಗಲೆಂಬುದು ಹಲವರ ಆಶಯವಾಗಿದೆ.
-ಹರಿಹರಪುರ ಶ್ರೀಧರ್
ಜೀವನ ಮೌಲ್ಯ "ಅಹಿಂಸೆ" ಬಗೆಗೆ ಪೂಜ್ಯ ಕೃತಾತ್ಮಾ ನಂದರ ಪ್ರವಚನ.
ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ. ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.
ಪ್ರೇತಾತ್ಮ ಮೈ ಮೇಲೆ ಬರುತ್ತದೆ, ಅಂತಾರಲ್ಲಾ?
ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?
ಶುಕ್ರವಾರ, ಜೂನ್ 22, 2012
ಮಂಗಳವಾರ, ಜೂನ್ 19, 2012
ಬಿಕ್ಷುಕ
ಬಿಕ್ಷುಕನೊಬ್ಬ ರಸ್ತೆಬದಿಯಲ್ಲಿ ಒಂದು ಕಲ್ಲಿನ ಚಪ್ಪಡಿಯಮೇಲೆ ಕುಳಿತು ಬಿಕ್ಷೆ ಬೇಡುತ್ತಿದ್ದಾನೆ. ಅದೇ ದಾರಿಯಲ್ಲಿ ಸನ್ಯಾಸಿಯೊಬ್ಬ ಬರುತ್ತಾನೆ.ಬಿಕ್ಷುಕನನ್ನು ನೋಡಿ -
"ಏನ್ ಮಾಡ್ತಾ ಇದೀಯಾ?"
-."ಬಿಕ್ಷೆ ಬೇಡ್ತಾ ಇದೀನಿ ಸ್ವಾಮಿ, ಮೂರು ದಿನಗಳಿಂದ ಹೊಟ್ಟೆಗಿಲ್ಲ.
- ಮೂರು ದಿನಗಳಿಂದ ಇಲ್ಲೇ ಇದ್ದೀಯಾ? "
- ಹೌದು ಸ್ವಾಮಿ ಇಲ್ಲೇ ಪಕ್ಕದಲ್ಲಿ ರಾತ್ರಿಹೊತ್ತು ಮಲಗುವೆ. ಬೆಳಿಗ್ಗೆ ಬಿಕ್ಷೆ ಎತ್ತುವೆ."-
- ನೀನು ಕುಳಿತಿದ್ದೀಯಲ್ಲಾ ಕಲ್ಲು ಅದನ್ನು ಜರುಗಿಸಿದ್ದೀಯಾ?"
-ಇಲ್ಲಾ ಸ್ವಾಮಿ, ನಾನೇಕೇ ಜರುಗಿಸಲಿ?
-ಇಲ್ಲೆಲ್ಲಾ ಕಸ ಬಿದ್ದಿದೆಯಲ್ಲಾ, ಅದನ್ನು ಜರುಗಿಸಿ ಕಸ ತೆಗೆಯಬಾರದಿತ್ತಾ?
-ಕಸ ಇರ್ಲೀ ಬಿಡಿ ಸ್ವಾಮಿ, ಅದೇನ್ ಮಾಡೀತು?
-ಸ್ವಲ್ಪ ಕಲ್ಲು ಜರುಗಿಸುತ್ತೀಯಾ?
-ಯಾಕ್ ಸ್ವಾಮಿ?
-ಕಸ ಇದೆಯಲ್ಲಾ, ಅದೆಲ್ಲಾ ಎತ್ತಿ ಹಾಕೋಕೆ....ಎಂದ ಸನ್ಯಾಸಿ ತಾನೇ ಕಲ್ಲನ್ನು ಜರಗಿಸುತ್ತಾನೆ. ಬಿಕ್ಷುಕನಿಗೆ ಆಶ್ಚರ್ಯ ಕಾದಿರುತ್ತೆ. ತಾನು ಕುಳಿತಿದ್ದ ಕಲ್ಲಿನ ಕೆಳಗೆ ಹಣದ ಪೆಟ್ಟಿಗೆ!!
ಹೌದು, ಆ ಬಿಕ್ಷುಕ ಮಾತ್ರವಲ್ಲಾ, ನಾವೂ ಕೂಡ ನಮ್ಮ ಒಳಗಿರುವ ಐಶ್ವರ್ಯದ ಪಟ್ಟಿಗೆಯ ಬಾಗಿಲನ್ನು ತೆರೆದೇ ಇಲ್ಲ.ಪೆಟ್ಟಿಗೆ ಬಾಗಿಲು ತೆರೆಯದೆ ,ತೆರೆಯಲು ಗೊತ್ತಾಗದೆ ಮನುಷ್ಯ ಅದೆಷ್ಟು ಸಂಕಟ ಪಡುತ್ತಾನೆ, ತನ್ನೊಳಗೇ ಇರುವ ಆನಂದವನ್ನು ಕಂಡುಕೊಳ್ಳಲಾರ! ಸನಿಹದಲ್ಲಿಯೇ ಇರುವ ಕಾಮ.ಕ್ರೋಧ, ಲೋಭ,ಮೋಹ, ಮದ,ಮತ್ಸರವೆಂಬ ಕಸವನ್ನು ಗುಡಿಸದೆ, ಅದರಲ್ಲಿಯೇ ಹೊರಳಾಡುತ್ತಿದ್ದಾನೆ. ಪೆಟ್ತಿಗೆಯ ಬಾಗಿಲು ತೆರೆದು ಬಿಟ್ಟರೆ ಮನತಣಿಸುವ ಆತ್ಮಾನಂದ!!ನಮ್ಮೊಳಗಿರುವ ಆನಂದವನ್ನು ಕಂಡುಕೊಳ್ಳುವ ದಾರಿ ನಮಗೆ ಗೊತ್ತಿಲ್ಲ. ಅದಕ್ಕಾಗಿ ಈ ಸನ್ಯಾಸಿಯಂತಹ ಗುರುವಿನ ಅವಶ್ಯಕತೆ ಇದೆ.
ಸೋಮವಾರ, ಜೂನ್ 18, 2012
ಯಶಸ್ವೀ ಸತ್ಸಂಗ
ದಿನಾಂಕ 17.6.2012 ಭಾನುವಾರ ಹಾಸನದಲ್ಲಿ ಚಿನ್ಮಯ ಸತ್ಸಂಗದ ಶುಭಾರಂಭವಾಯ್ತು. ಬೆಳಿಗ್ಗೆ 11.00 ಗಂಟೆಗೆ ನಡೆದ ಆಸಕ್ತರ ಸಭೆಯಲ್ಲಿ ತಿಪಟೂರು ಚಿನ್ಮಯಾ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಮಾರ್ಗದರ್ಶನ ಮಾಡಿದರು. ಸಂಜೆ 6.00 ಗಂಟೆಗೆ ನಡೆದ ಸತ್ಸಂಗದಲ್ಲಿ ಹಾಸನದ ನೂರಾರು ಜನ ಭಕ್ತರು ಪಾಲ್ಗೊಂಡು ಸತ್ಸಂಗದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಲಿತಾರಮೇಶರ ಪ್ರಾರ್ಥನೆಯೊಂದಿಗೆ ಆರಂಭವಾದ ಸತ್ಸಂಗದಲ್ಲಿ ಶ್ರೀಹರಿಹರಪುರ ಶ್ರೀಧರರು ಹಾಸನದಲ್ಲಿ ಚಿನ್ಮಯ ಸಂಸ್ಥೆಯ ನ್ನು ಆರಂಭಿಸಲು ಎಲ್ಲರ ಸಹಕಾರ ಕೋರಿ ಸಭೆಗೆ ಸ್ವಾಮೀಜಿಯವರನ್ನು ಪರಿಚಯಿಸಿದರು. ಸ್ವಾಮೀಜಿಯವರು ನಡೆಸಿಕೊಟ್ಟ ಭಜನೆ ಮತ್ತು ನಂತರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆಯಿಂದ ಭಕ್ತರು ಪಾಲ್ಗೊಂಡು ಕೊನೆಯಲ್ಲಿ ಸ್ವಾಮೀಜಿಯವರಿಂದ ಪ್ರಸಾದವನ್ನು ಪಡೆದರು.
ಮುಂದಿನ ಸತ್ಸಂಗವು ಈಶಾವಾಸ್ಯಮ್ ಸಭಾಂಗಣದಲ್ಲಿಯೇ ಜುಲೈ 8 ರಂದು ಅಪರಾಹ್ನ 4.00 ಗಂಟೆಗೆ ನಡೆಯಲಿದ್ದು ತದನಂತರ ಜುಲೈ 22 ರಂದು ಅದೇ ಸ್ಥಳದಲ್ಲಿ ಅಪರಾಹ್ನ 4.00 ಗಂಟೆಗೆ ನಡೆಯುವ ಸತ್ಸಂಗದಲ್ಲಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಳ್ಳಲಿರುವರು.
ಮುಂದಿನ ಸತ್ಸಂಗವು ಈಶಾವಾಸ್ಯಮ್ ಸಭಾಂಗಣದಲ್ಲಿಯೇ ಜುಲೈ 8 ರಂದು ಅಪರಾಹ್ನ 4.00 ಗಂಟೆಗೆ ನಡೆಯಲಿದ್ದು ತದನಂತರ ಜುಲೈ 22 ರಂದು ಅದೇ ಸ್ಥಳದಲ್ಲಿ ಅಪರಾಹ್ನ 4.00 ಗಂಟೆಗೆ ನಡೆಯುವ ಸತ್ಸಂಗದಲ್ಲಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಳ್ಳಲಿರುವರು.
ಶುಕ್ರವಾರ, ಜೂನ್ 15, 2012
ಚಿನ್ಮಯ ಸತ್ಸಂಗ
ಚಿನ್ಮಯ ಸತ್ಸಂಗ
11.06.2012
ಭಾನುವಾರ
ಸ್ಥಳ: ಈಶಾವಾಸ್ಯಮ್,ಶಕ್ತಿಗಣಪತಿದೇವಾಲಯ
ರಸ್ತೆ
ಹೊಯ್ಸಳನಗರ,ಹಾಸನ
ಆಸಕ್ತರ ಸಭೆ:
ಬೆಳಿಗ್ಗೆ 11.00 ಕ್ಕೆ ಸತ್ಸಂಗ: ಸಂಜೆ:
6.00 ಕ್ಕೆ
ಮಿತ್ರರೊಡಗೂಡಿ
ಬನ್ನಿ,
ಸಂಪರ್ಕಿಸಲು:
9663572406
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)