ತಿಪಟೂರು ಚಿನ್ಮಯ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿ ಈ ತಿಂಗಳಲ್ಲಿ ಒಮ್ಮೆ ಹಾಸನಕ್ಕೆ ಬರುವುದಾಗಿ ತಿಳಿಸಿರುತ್ತಾರೆ. ಆ ಸಮಯದಲ್ಲಿ ಸತ್ಸಂಗವನ್ನು ಏರ್ಪಡಿಸಲಾಗುವುದು. ಚಿನ್ಮಯ ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತರ ಸಭೆಯೊಂದನ್ನು ಕರೆದು ಎಲ್ಲರ ಸಲಹೆಗಳನ್ನು ತೆಗೆದುಕೊಂಡು ಚಿನ್ಮಯ ಕೆಂದ್ರವನ್ನು ಹಾಸನದಲ್ಲಿ ಆರಂಭಿಸಬೇಕೆಂಬ ಚಿಂತನೆ ನಡೆದಿದೆ. ಶ್ರೀ ಸುಧರ್ಮ ಚೈತನ್ಯರು ಹಾಸನಕ್ಕೆ ಬರುವ ದ್ಕಿನ ಮತ್ತು ಉಳಿದ ವಿವರವನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ